`ಭುವನಂ ಗಗನಂ` ಸಿನಿಮಾಗೆ ಧ್ರುವ ಸರ್ಜಾ,ನೆನಪಿರಲಿ ಪ್ರೇಮ್, ನಿರ್ದೇಶಕ ಸಿಂಪಲ್ ಸುನಿ ಸಾಥ್..ಮಾನ್ಸೂನ್ ಗೆ ಪೃಥ್ವಿ-ಪ್ರಮೋದ್ ಸಿನಿಮಾ ತೆರೆಗೆ
Posted date: 18 Mon, Mar 2024 08:37:00 AM
ಸ್ಯಾಂಡಲ್ ವುಡ್ ಅಂಗಳದ ಇಬ್ಬರು ಪ್ರತಿಭಾನ್ವಿತ ನಟರಾದ ಸಲಾರ್ ಪ್ರಮೋದ್ ಹಾಗೂ ದಿಯಾ ಪೃಥ್ವಿ ಅಂಬಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ ಭುವನಂ ಗಗನಂ. ಈ ಚಿತ್ರದ ನಿರ್ಮಾಪಕ ಎಂ. ಮುನೇಗೌಡ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಟೀಸರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಬೆಸ್ಟ್ ವಿಷಸ್ ತಿಳಿಸಿದ್ದಾರೆ. ಬೆಂಗಳೂರಿನ ಡಾ.ರಾಜಕುಮಾರ ಇಂಡೋರ್ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನಟ ನೆನಪಿರಲಿ ಪ್ರೇಮ್, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಹಲವರು ಉಪಸ್ಥಿತಿದ್ದರು. 
 
ಟೀಸರ್ ರಿಲೀಸ್ ಬಳಿಕ ಧ್ರುವ ಸರ್ಜಾ ಮಾತನಾಡಿ, ಚಿತ್ರದ ಟೈಟಲ್ ಕೇಳಿದ ತಕ್ಷಣ ನನಗೆ ನೆನಪಾಗಿದ್ದು, ಭುವನಂ ಗಗನಂ ಸಾಂಗ್. ವಂಶಿ ಚಿತ್ರದ್ದು. ಪುನೀತ್ ಸರ್ ನೆನಪಾದರು. ಅಪ್ಪು ಸರ್ ಗೆ ಬರ್ತ್ ಡೇ ವಿಷ್ ಮಾಡ್ತಾ ಮಾತನಾಡಲು ಶುರು ಮಾಡುತ್ತೇನೆ. ನಾನು ಇವತ್ತು ಇಲ್ಲಿಗೆ ಬರಲು ಮುಖ್ಯ ಕಾರಣ ಈ ಚಿತ್ರದ ಟೆಕ್ನಿಷಿಯನ್ಸ್. ನಮ್ಮ ಅಣ್ಣ ಹಾಗೂ ಸುದೀಪ್ ಸರ್ ನಟಿಸಿದ ವರದನಾಯಕ ಸಿನಿಮಾದಲ್ಲಿ  ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದವರು ಗಿರೀಶ್ ಮೂಲಿಮನಿ.‌ ಅವರು ಈ ಚಿತ್ರದ ನಿರ್ದೇಶಕ ಗಿರೀಶ್. ಈ ಸಿನಿಮಾದ ಟ್ರೇಲರ್ ನೋಡಿದರೇ ಟೇಕಿಂಗ್ ಚೆನ್ನಾಗಿದೆ. ಈ ಚಿತ್ರದ ಡಿಒಪಿ ಉದಯ್ ಅವರು. ಅವರ ಜೊತೆ ಬಹದ್ದೂರು, ಭರ್ಜರಿ ಮಾಡಿದ್ದೇವೆ. ಅವರು ಅದ್ಭುತ ವರ್ಕರ್. ಮ್ಯೂಸಿಕ್ ಡೈರೆಕ್ಟರ್ ಜೊತೆಯೂ ಕೆಲಸ ಮಾಡಿದ್ದೇವೆ. ನಮ್ಮ ಎಡಿಟರ್ ಸುನಿಲ್ ಸರ್. ಇವತ್ತು ನಿರ್ಮಾಪಕ ಮುನೇಗೌಡರು ಜನ್ಮದಿನ.ಅವರಿಗೆ ಒಳ್ಳೆಯದು ಆಗಲಿ. ಸಿನಿಮಾದ ಹೀರೋ ಪ್ರಮೋದ್, ಹಾಗೂ ಪೃಥ್ವಿ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿ. ಈ ಸಿನಿಮಾ ಸೂಪರ್ ಹಿಟ್ ಆಗುತ್ತದೆ  ಎಂದರು.

ನಟ ಪ್ರಮೋದ್ ಮಾತನಾಡಿ, ಭುವನಂ ಗಗನಂ ತುಂಬಾ ಇಷ್ಟಪಟ್ಟು ಒಪ್ಪಿಕೊಂಡ ಸಿನಿಮಾ. ಯಾಕಂದರೆ ನಾನು ಲವ್ ಸ್ಟೋರಿ ಮಾಡಿರಲಿಲ್ಲ. ಗಿರೀಶ್ ಸರ್ ಕಥೆ ಹೇಳಿದಾಗ, ಸೀನ್ಸ್ ಹೇಳಿದಾಗ ಖುಷಿಯಾಯ್ತು. ಅಂದರೆ ಈ ತರಹದ್ದು ಸಿನಿಮಾ ಮಾಡಿದರೆ ತುಂಬಾ ಜನ, ಫ್ಯಾಮಿಲಿ, ಹೆಣ್ಮಕ್ಕಳಿಗೆ ರೀಚ್ ಆಗುತ್ತದೆ.  ಅಂತಾ ಖುಷಿಪಟ್ಟು ಒಪ್ಪಿಕೊಂಡಿದ್ದೇನೆ. ಗಿರೀಶ್ ಸರ್ ಶೂಟ್ ಮಾಡಿದಾಗ ಯಾಕೆ ಇಷ್ಟು ಇವರು ನಿಧಾನ ಇದ್ದಾರೆ ಎಂದು ಗಾಬರಿಯಾಗಿತ್ತು. ಡಬ್ಬಿಂಗ್ ಶುರುವಾಗಿದೆ. ಸಿನಿಮಾ ನೋಡುತ್ತಿದ್ದೇವೆ. ಈಗ ಅವರು ಯಾಕೆ ನಿಧಾನ ಶೂಟ್ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ. ಪ್ರತಿಯೊಬ್ಬರು ಅವರು ಅಂದುಕೊಂಡಂತೆ ಬರಲು ತಡವಾಗಿದೆ ಎಂದು ಅರ್ಥವಾಯ್ತು. ಎಲ್ಲರಿಗೂ ಸಿನಿಮಾ ಇಷ್ಟವಾಗುತ್ತದೆ. ಮುನೇಗೌಡ ತುಂಬಾ ಫ್ಯಾಷನೇಟೆಡ್ ನಿರ್ಮಾಪರು ಎಂದರು.

ನಿರ್ದೇಶಕ ಗಿರೀಶ್ ಮಾತನಾಡಿ, ಭುವನಂ ಗಗನಂ ಟೀಸರ್ ಲಾಂಚ್ ಮಾಡಿದ್ದೇವೆ.  ಟೀಸರ್ ಲಾಂಚ್ ಮಾಡಲು ಕಾರಣ ನಿರ್ಮಾಪಕ ಹುಟ್ಟುಹಬ್ಬ. ಅವರ ಬರ್ತ್ ಡೇಗೆ ಏನಾದರೂ ಗಿಫ್ಟ್ ಕೊಡಲು ಟೀಸರ್ ಲಾಂಚ್ ಮಾಡಿದ್ದೇವೆ. ಸಿನಿಮಾ ಜರ್ನಿ ಬಗ್ಗೆ ಹೇಳಲು ತುಂಬಾ ಇದೆ. ಇದು ಜಸ್ಟ್ ಟೀಸರ್. ಮುಂದೆ ಸಾಂಗ್ ಇದೆ. ಟ್ರೇಲರ್ ಇದೆ. ಸಿನಿಮಾ ಚೆನ್ನಾಗಿದೆ. ಅದರಲ್ಲೂ ಯೂತ್ಸ್ ಗೆ ಕನೆಕ್ಟ್ ಆಗುತ್ತದೆ. ಫ್ಯಾಮಿಲಿ ಎಂಟರ್ ಟೈನರ್ ಕಥೆ ಇದೆ. ಸಿನಿಮಾದ ಪ್ರತಿ ಹಂತದಲ್ಲಿಯೂ ನಿರ್ಮಾಪಕರು ಬೆಂಬಲವಾಗಿ ನಿಂತಿದ್ದಾರೆ ಎಂದರು.

ಗಿರೀಶ್ ಮೂಲಿಮನಿ ಕಥೆ, ಚಿತ್ರಕಥೆ ಬರೆದು ಭುವನಂ ಗಗನಂ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ರಾಜರು ಎಂಬ ಚಿತ್ರ ಮಾಡಿದ್ದರು. ಇದೀಗ ಭುವನಂ ಗಗನಂ ಮೂಲಕ ಮತ್ತೊಂದು ಫ್ರೆಶ್ ಕಥೆಯನ್ನು ಹೇಳೋದಿಕ್ಕೆ ಬರ್ತಿದ್ದಾರೆ. ಕನ್ನಡ ಸಿನಿಮಾ ರಂಗಕ್ಕೆ ಅದ್ಭುತ ಸಿನಿಮಾಗಳನ್ನು ಕೊಡುಗೆಯಾಗಿ ನೀಡ್ಬೇಕೆಂಬ ಕನಸಿನೊಂದಿಗೆ ನಿರ್ಮಾಪಕ ಎಂ ಮುನೇಗೌಡ ತಮ್ಮದೇ ಎಸ್ ವಿಸಿ ಫಿಲ್ಮಂಸ್ ಪ್ರೊಡಕ್ಷನ್ ನಡಿ ಭುವನಂ ಗಗನಂಗೆ ಹಣ ಹಾಕಿದ್ದಾರೆ.

ಭುವನಂ ಗಗನಂ ಸಿನಿಮಾ ಲವ್, ರೋಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಕಥಾಹಂದರ ಸಿನಿಮಾವಾಗಿದ್ದು, ನಗರ, ಹಳ್ಳಿ ಎರಡು ಬ್ಯಾಕ್ ಡ್ರಾಪ್ ನಲ್ಲಿ ನಡೆಯುವ ಕಥೆಯಾಗಿದ್ದು, ಪ್ರಮೋದ್ ಗೆ ಜೋಡಿಯಾಗಿ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್, ಪೃಥ್ವಿಗೆ ಜೋಡಿಯಾಗಿ ಅಶ್ವಥಿ ನಟಿಸ್ತಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗ ತಾರಾಬಳಗದಲ್ಲಿದ್ದಾರೆ. ಉದಯ್ ಲೀಲಾ ಕ್ಯಾಮೆರಾ ಕೈಚಳಕ, ಗುಮ್ಮಿನೇನಿ ವಿಜಯ್ ಮ್ಯೂಸಿಕ್ ಕಿಕ್, ಸುನೀಲ್ ಕಶ್ಯಪ್ ಸಂಕಲನ ಸಿನಿಮಾಕ್ಕಿದೆ. ಮಾನ್ಸೂನ್ ಗೆ ಭುವನಂ ಗಗನಂ ಸಿನಿಮಾ ತೆರೆಗೆ ಬರಲಿದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed